    ಮೂಲದೊಡನೆ ಪರಿಶೀಲಿಸಿ
ಕೂಲಂಬನ ನಿಯಮ

ಚಾಲ್ರ್ಸ್ ಅಗಸ್ಟಿನ್ ಡಿ ಕೊಲಂಬ್ (1736-1806) ಸ್ಥಿರ ವಿದ್ಯುತ್ ಶಾಸ್ತ್ರವನ್ನು ಕುರಿತು ನಿರೂಪಿಸಿದ ನಿಯಮ. ನಿರೂಪಣೆ ಹೀಗಿದೆ: ನಿರ್ವಾತ ಪ್ರದೇಶದಲ್ಲಿ ಎರಡು ವಿದ್ಯುದಾವೇಷಗಳನ್ನು (ಎಲೆಕ್ಟ್ರಿಕಲ್ ಚಾರ್ಜಸ್) ಇಟ್ಟರೆ ಅವು ಪರಸ್ಪರ ಅನುಭವಿಸುವ ವಿದ್ಯುತ್ ಬಲ. ಆ ಆವೇಷಗಳ ಗುಣಲಬ್ದದ ನೇರ ಅನುಪಾತದಲ್ಲಿಯೂ ಅವುಗಳ ನಡುವಿನ ಅಂತರದ ವರ್ಗದ ವ್ಯಸ್ಥಾನುಪಾತದಲ್ಲಿಯೂ ಇರುತ್ತದೆ. q1,  q- ವಿದ್ಯುದಾವೇಷಗಳೆಂದು ಖ ಅವುಗಳ ನಡುವಿನ ಅಂತರಗಳೆಂದು ಭಾವಿಸಿದರೆ ಬಲ ಈ ಅನ್ನು ಕೂಡುವ ಸಮೀಕರಣ  ಈ  =  ಞ0 q1 q2 /ಡಿ2 ಎಂದಾಗುವುದು. ಇಲ್ಲಿ ಞo ಅನುಪಾತದ ಸ್ಥಿರಾಂಕ. ಎರಡು ಏಕಮಾನ ಆವೇಷಗಳನ್ನು ನಿರ್ವಾತದಲ್ಲಿ ಒಂದು ಸೆಂ.ಮಿ.ದೂರದಲ್ಲಿಟ್ಟಾಗ ಅವುಗಳ ನಡುವೆ ಆಕರ್ಷಕ (ವಿಜಾತಿಯ ಆವೇಷಗಳಿದ್ದಾಗ) ಅಥವಾ ವಿಕರ್ಷಕ (ಸಜಾತಿಯ ಆವೇಷಗಳಿದ್ದಾಗ) ವಿದ್ಯುತ್ ಬಲ 1 ಡೈನ್ ಇರಬೇಕು. ಆದ್ದರಿಂದ ಜಿ = q1 q2 /ಡಿ2 ಎಂದು ಬರೆದರೆ (ಞ0 =1) ಆವೇಷಗಳನ್ನು ಸ್ಥಿರವಿದ್ಯುತ್ ಏಕಮಾನದಲ್ಲಿ ಇಡಲಾಗಿದೆ ಎಂದು ತಿಳಿಯಬೇಕು. 

ಕೊಲಂಬ್ ತಾನೇ ಶೋಧಿಸಿದ ತಿರುಚು ತುಲಾಯಂತ್ರದ (ಟಾರ್ಷನ್ ಬ್ಯಾಲೆನ್ಸ್) ನೆರವಿನಿಂದ ಮೇಲಿನ ನಿಯಮವನ್ನು ಸ್ಥೂಲವಾಗಿ ಸಾಧಿಸಿದ. ಇದು ಪ್ರತ್ಯಕ್ಷ ಪದ್ಧತಿಯಾದರೂ ಡಿ ನ ಘಾತಾಂಕ ನಿಖರವಾಗಿ 2 ಎಂದು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಅಪ್ರತ್ಯಕ್ಷ ಪದ್ಧತಿಯನ್ನು ಉಪಯೋಗಿಸಲಾಗಿದೆ. ಪ್ರಥಮತಃ ಹೆನ್ರಿ ಕ್ಯಾವೆಂಡಿಷ್ (1731-1810) ಇಂಥ ಪದ್ಧತಿಯಿಂದ ಡಿ ನ ಘಾತಾಂಕ 1.98 ರಿಂದ 2.02 ಪರಿಮಿತಿಗಳೊಳಗಿದೆ ಎಂದು ತೋರಿಸಿದ. 1936ರಲ್ಲಿ ಪ್ಲಿಂಪ್ಟನ್ ಮತ್ತು ಲಾಟನ್ ಎಂಬುವರು ಅತ್ಯಂತ ಸೂಕ್ಷ್ಮವಾದ ಪ್ರಯೋಗ ಮಾಡಿ ಇದರ ಬೆಲೆ 1.9999999998 ರಿಂದ 2.000000002 ಪರಿಮಿತಿಗಳೊಳಗಿದೆ ಎಂದು ತೋರಿಸಿದ್ದಾರೆ. ಈ ಅಪ್ರತ್ಯಕ್ಷ ಪದ್ಧತಿಯ ಪ್ರಯೋಗಗಳು ಟೊಳ್ಳು ವಾಹಕದ ಒಳಗೆ ಆವೇಷಗಳನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ತೋರಿಸಿ ಇದರಿಂದ ಘಾತಾಂಕವನ್ನು ನಿರ್ಣಯಿಸುತ್ತವೆ. ಪ್ಲಿಂಪ್ಟನ್ ಮತ್ತು ಲಾಟನ್ ಕೊಟ್ಟ ಪರಿಮಿತಿಗಳೇ ಈಗ ಒಪ್ಪಿಗೆಯಾಗಿವೆ. ಆದರೆ ವ್ಯವಹಾರದಲ್ಲಿ ಡಿ ನ ಘಾತಾಂಕವನ್ನು 2 ಎಂದು ಇಟ್ಟುಕೊಳ್ಳುವ ರೂಢಿ ಉಂಟು. 

ನಿರ್ವಾತದ ಬದಲು ಯಾವುದೇ ಏಕರೀತಿ ಮಾಧ್ಯಮದಲ್ಲಿ ಆವೇಷಗಳನ್ನು ಇಟ್ಟರೆ ಕೂಡ ಕೊಲಂಬನ ನಿಯಮ ಅನ್ವಯವಾಗುತ್ತದೆ. ಆದರೆ ವಿದ್ಯುತ್ ಬಲ ಆ ಮಾಧ್ಯಮದ ಪರಾವೈದ್ಯುತಾಂಕ (ಪರ್ಮಿಟಿವಿಟಿ) ಅಥವಾ ಪರಾವೈದ್ಯುತ (ಡೈ ಎಲೆಕ್ಟ್ರಿಕ್) ಸ್ಥಿರಾಂಕ ಎಂಬ ಅಂಕಕ್ಕೆ ವ್ಯಸ್ಥಾನುಪಾತವಾಗಿ ಕಡಿಮೆಯಾಗುವುದು. ಅಂದರೆ   ಜಿ = q1 q2 /ಞಡಿ2 ಆಗುತ್ತದೆ. (ನಿರ್ವಾತಕ್ಕೆ ಞ =1 ಎಂದು ಬರೆಯಬಹುದು. ಗಾಳಿಯಲ್ಲಿ ಞಯ ಬೆಲೆ ಸುಮಾರು 1 ಎಂದು ಇಟ್ಟುಕೊಳ್ಳಬೇಕು. 
ಕೊಲಂಬನ ನಿಯಮ ಸುಮಾರು 10-13 ಸೆಂ.ಮೀ. ಅಲ್ಪತಮ ಡಿ ಬೆಲೆಗಳವರೆಗೆ ಅನ್ವಯವಾಗುತ್ತದೆ. ಇದಕ್ಕಿಂತ ಕಡಿಮೆ ದೂರಗಳಿಗೆ ಅನ್ವಯವಾಗುವುದಿಲ್ಲ. ಈ ನಿಯಮ ಪ್ರಸ್ತಾಪಿಸುವ ವಿದ್ಯುತ್ ಬಲಗಳೇ (ಇವಕ್ಕೆ ಕೊಲಂಬ್ ಬಲಗಳು ಎಂದು ಹೆಸರು) ಪರಮಾಣುಗಳಲ್ಲಿ  ನ್ಯೂಕ್ಲಿಯಸ್ ಹತ್ತಿರ ಎಲೆಕ್ಟ್ರಾನುಗಳನ್ನು ಬಂಧಿಸುವ ಬಲಗಳಾಗಿವೆ. ಕೊಲಂಬನ ನಿಯಮ ಕಾಂತದ್ರುವಗಳಿಗೂ  ಅನ್ವಯವಾಗುತ್ತದೆ. ಅಲ್ಲಿ ಆವೇಷಗಳ ಬದಲು ಕಾಂತದ್ರುವಗಳನ್ನು ಗಮನಿಸಬೇಕಾಗುತ್ತದೆ. ಞ ಯ ಬದಲು ( ಎಂಬ ಅಂಕ (ಪರ್ಮಿ ಎಬಿಲಿಟಿ) ಇಲ್ಲಿ ಸಿಗುತ್ತದೆ. 									
(ಆರ್.ಎಸ್.ಬಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ